Index   ವಚನ - 26    Search  
 
ಹಿರಿಯತನಕ್ಕೆ ಪಥವೆ,ಬಾಣನ ಮನೆಯ ಬಾಗಿಲ ಕಾಯ್ವುದು ? ಮಹಂತತನಕ್ಕೆ ಪಥವೆ, ನಂಬಿಗೆ ಕುಂಟಣಿಯಾದುದು ? ಕರುಣಿತನಕ್ಕೆ ಪಥವೆ,ಸಿರಿಯಾಳನ ಮಗನ ಕೊಲುವುದು ? ದಾನಿತನಕ್ಕೆ ಪಥವೆ, ದಾಸನ ವಸ್ತ್ರವ ಸೀಳುವುದು ? ನಿಮ್ಮ ಹಿರಿಯತನಕ್ಕಿದು ಪಥವೆ,ಬಲ್ಲಾಳನ ವಧುವ ಬೇಡುವುದು ? ನಿಮ್ಮ ಗುರುತನಕ್ಕಿದು ಪಥವೆ,ನಾರಿಯರಿಬ್ಬರೊಡನೆ ಇಪ್ಪುದು ? ಶಿವಶಿವಾ ನಿಮ್ಮ ನಡವಳಿ ? ಶಂಭುಜಕ್ಕೇಶ್ವರಾ, ಅಲ್ಲದಿರ್ದಡೇಕೆ ಶ್ರುತಿಗಳ ಕೈಯಿಂದತ್ತತ್ತಲೆನಿಸಿಕೊಂಬೆ.