Index   ವಚನ - 2    Search  
 
ತನುವಿಡಿದು ದಾಸೋಹವ ಮಾಡಿ ಗುರುಪ್ರಸಾದಿಯಾದ ಬಸವಣ್ಣ, ಮನವಿಡಿದು ದಾಸೋಹವ ಮಾಡಿ, ಲಿಂಗಪ್ರಸಾದಿಯಾದ ಬಸವಣ್ಣ, ಧನವಿಡಿದು ದಾಸೋಹವ ಮಾಡಿ, ಜಂಗಮಪ್ರಸಾದಿಯಾದ ಬಸವಣ್ಣ, ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ ಸದ್ಗುರು ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಸವಣ್ಣ ಸ್ವಯಂಪ್ರಸಾದಿಯಾದನಯ್ಯಾ.