ವಚನ - 61     
 
ಅಯ್ಯಯ್ಯಾ, ನೀ ಬಾರಯ್ಯ ಬಾರಯ್ಯ. ಆನಂದದಾದಿಯಲ್ಲಿ ಬಂದೆನ್ನ ಕರದಲ್ಲಿ ನಿಲ್ಲಯ್ಯ. ಅಯ್ಯಯ್ಯಾ, ಒಯ್ಯನೆ ಕೈಯಗುಡಯ್ಯ. ಕಂಗೆಟ್ಟ ಪಶುವಾದೆನು ಎಲೆ ಅಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಕರುಣಿಸು ನಿಮ್ಮ ಧರ್ಮ.