ವಚನ - 63     
 
ಅಯ್ಯಾ, ಆನಂದದಾನಂದದಲ್ಲಿ ಎಂದಿಪ್ಪೆನೋ. ಆದಿ ಅಕ್ಷರದೊಳಗೆ ಅಯ್ಯಾ, ನಾನು ಭೇದಾದಿ ಭೇದವೆಂದರಿದೆನಯ್ಯಾ. ಹೋದ ಹೋದ ಬಟ್ಟೆಯ ನೋಡಿ ನೋಡಿ ಬೆರಗಾದೆನಯ್ಯಾ. ವಿಚಿತ್ರ ಮೂಲ ಕಪಿಲಸಿದ್ಧಮಲ್ಲಿಕಾರ್ಜುನಾ, ಎನ್ನ ಚಿತ್ತ ವಿಚಿತ್ತವ ಮಾಡದಿರು ತಂದೆ.