Index   ವಚನ - 69    Search  
 
ಅಯ್ಯಾ, ನಾನೆಂಬುದನು ಒಯ್ಯನೆ ಒಯ್ಯನೆ ಮರೆದೆ. ಅಯ್ಯಾ, ನೀ ಗುರುವಾಗಿ ಕರುಣದಿಂದ ಒಯ್ಯನೆ ಬಂದೆನ್ನ `ಅಯ್ಯೋ ಮಗನೆ' ಎಂದು ಕೈವಿಡಿದು ತೆಗೆದೆನ್ನ ಸಲಹಿದಿರಿ ಕರುಣದಿಂದ. ಆನೀಗ ನಿಮ್ಮ ಅವ್ಯಯದ ಪದಕಾನು ಮೂಲನಾದೆ ಕಪಿಲಸಿದ್ಧಮಲ್ಲಿಕಾರ್ಜುನ.