ಅಯ್ಯಾ, ನಿನಗೆರಗಿದವರಿಗೆ ಜನವರೆಗಿ
ಮರುಗುವದಿದೆ ಕಾರಣವಯ್ಯ.
ಅಯ್ಯಾ, ಹಾ ಹಾ, ನಾಲಗೆಯೆರಳೆಗೆ ಗುಣವೆಂಬ ತಂಪಿಗೆ
ಜನವೆರೆಗಿ ಮರುಗುವದಯ್ಯ.
ಹಾಹಾ, ಅಲ್ಲಿ ನೀನಿಪ್ಪ ಕಾರಣ ತಂಪಿನ ಸಿಂಪುಳಿಕ
ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Ayya, ninageragidavarige janavaregi
marugide kāraṇavayya.
Ayyā, hā hā, nālageyeraḷege guṇavemba tampige
janaveregi maruguvadayya.
Hāhā, alli nīnippa kāraṇa tampina simpuḷika
kapilasid'dhamallināthayya।