ವಚನ - 83     
 
ಅಯ್ಯಾ, ನಿಮ್ಮ ಮಹಾನುಭಾವರಿಂದ ಮಹಾವಸ್ತುವಿನ ಪ್ರಮಾಣವನರಿದೆ; ಶುದ್ಧ ಸಿದ್ಧ ಪ್ರಸಿದ್ಧವಿದೆಂದರಿದೆ; ಪಾದೋದಕ ಪ್ರಸಾದ ಭಕ್ತಿಯೆಂಬ ನಿಶ್ಚಯವನರಿದೆ. ನಿಮ್ಮ ಮಹಾನುಭಾವರಿಂದ ಪರತತ್ವಪ್ರಮಾಣುವನರಿದು ಶರಣು ಶರಣೆನುತಿದ್ದೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.