ವಚನ - 100     
 
ಅಯ್ಯಾ, ಸಂಸಾರದುಪಟಳವು ಕಾಡಿತ್ತು ಇನ್ನೇವೆನಿನ್ನೇವೆ? ಕಾಮಕಿಚ್ಚೈಸಿತ್ತು ಇನ್ನೇವೆನಿನ್ನೇವೆ? ಕ್ರೋಧಕಿಚ್ಚೈಸಿತ್ತು ಇನ್ನೇವೆನಿನ್ನೇವೆ? ನಿನ್ನ ಮಚ್ಚಲೀಯದು ಇನ್ನೇವೆನಿನ್ನೇವೆ? ಭಕ್ತಿತಾತ್ಪರ್ಯವ ಅವಮನ್ನಣೆಯ ಮಾಡಿತ್ತು ಶ್ರೀಗುರುವೆ ಕಪಿಲಸಿದ್ಧಮಲ್ಲಿಕಾರ್ಜುನ.