Index   ವಚನ - 101    Search  
 
ಅಯ್ಯಾ, ಸಂಸಾರವೆಂಬ ಸಾಗರಕ್ಕೆ ಒಡಲೆಂಬುದೊಂದು ಭೈತ್ರ ಕಂಡಯ್ಯಾ. ಪುಣ್ಯ-ಪಾಪಂಗಳೆಂಬ ಭಂಡವನೆ ತುಂಬಿ ಪಂಚೈವರು ಏರಿದಡೆ, ಜ್ಞಾನವೆಂಬ ಕೂಕಂಬಿಯಲ್ಲಿ ಲಿಂಗವೆಂಬ ತಾರಾಮಂಡಲವ ನೋಡಿ ನಡೆಸುವುದು. ಜವನ ಕಾಲಾಳು ಕರಹಿರಿದು ಕಂಡಾ, ಸಮಭೋಗವೆಂಬ ನೇಣ ನವನಾಳದಲ್ಲಿ ಕಟ್ಟಿ ಮನವೆಂಬ ಪಾವೆಯನು ವಾಯುಗೊಳಲು ಕಳವಳವೆಂಬ ಕಡಲೊಳಗೆ ಸಿಲುಕೆ, ತೆರೆಯ ಹೊಯ್ಲು ಕರ ಹಿರಿದು ಕಂಡಯ್ಯಾ. ಉದಮದವೆಂಬ ಸುಳಿಯಲ್ಲಿ ತಿರುಗಿಸದೆ ಗುರುಪದವೆಂಬ ಬೆಂಗುಂಡ ಹಿಡಿ ಕಂಡಾ. ಇಹಲೋಕ-ಪರಲೋಕ ಕಪಿಲಸಿದ್ಧಮಲ್ಲೇಶ್ವರನ ಕಾಂಬೆ ಕಂಡಾ.