•  
  •  
  •  
  •  
Index   ವಚನ - 106    Search  
 
ಅಯ್ಯಾ, ಹಿಂದೆ ನಾ ಬಂದ ಹಲವು ಭವ ಸಾಲದೆ? ಏಕೆ ಕಾಡುವೆಯಯ್ಯಾ. ಹಿಂದೆ ನಿನ್ನನರಿಯದೆ ದಾನವರಾಗಿ ಹಲವು ಭವದಲ್ಲಿ ಕುಡಿದು ಆನುಂಡ ನರಕವ ನೀನರಿಯ. ಅರಿದರಿದೆನ್ನ ಕಾಡುವರೆ? ಅಯ್ಯಾ, ನಾನು ಬಂದ ಸುಖಂಗಳಲ್ಲಿ ನಿನ್ನನರಿಯದ ಕಾರಣದಲ್ಲಿ ನೀನಿಕ್ಕಿದೆ ನರಕಲ್ಲಿ, ಆನದನುಣ್ಣದಿದ್ದಡೆ ಎನ್ನ ವಶವೆ? ಕಪಿಲಸಿದ್ಧಮಲ್ಲಿಕಾರ್ಜುನ.
Transliteration Ayya, hinde nā banda halavu bhava sālade? Ēke kāḍuvayya. Hinde ninnanariyade dānavarāgi halavu bhavadalli kuḍidu ānuṇḍa narakava nīnariya. Aridaridenna kāḍuvare? Ayya, nānu banda sukhagaḷalli ninnanariyada kāraṇadalli nīnikkide narakalli, ānadanuṇṇadiddaḍe enna vaśave? Kapilasid'dhamallikārjuna.