Index   ವಚನ - 108    Search  
 
ಅಯಿದಾರೇಳೆಂಟೆಂಬ ಬಲೆಯಲ್ಲಿ ಸಿಲುಕಿ ಎಯ್ದೆ ಗಾರಾಗುತ್ತಿದ್ದೇನೆ ಮೀರಲಾರೆನು ಕರ್ಮಗಳನು ಗಾರು ಮಾಡಿಹವೆನ್ನ ಬೇರೆ ಮತ್ತೊಂದೊಳವೆ? ತೋರಾರುವ ಶ್ರುತಿಗಳಿಂದತ್ತತ್ತಲಾದ ಮಹಾಘನ ನೀನು ನೀರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.