Index   ವಚನ - 112    Search  
 
ಅರಿತವನೆಂತು ಸತ್ತನು? ಅರಿತವನೆಂತು ಹುಟ್ಟಿದನು? ಅರಿತವನೆಂತು ಅಘೋರಪಾಶಕ್ಕೆ ಒಳಗಾದೆನು? ಅರಿತವನೆ ಚಿರಂಜೀವಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.