ಅವರನಿವರಗೆ ಹೇಳಲದೇಕೆ,
ಇವರನವರಿಗೆ ಹೇಳಲದೇಕೆ?
ಒಬ್ಬರಿಗೆ ಹೇಳಿ ಕೂಗಿಡಲೇಕೆ,
ಒಬ್ಬರಿಗೆ ಕಣ್ಣುಗಳ ಹರಹರಿಕೆ.
ಕಪಿಲಸಿದ್ಧಮಲ್ಲಿನಾಥಾ,
ನೀನಿಕ್ಕಿದ ತೊಡಕಿನ ನಾಟಕವೆಂಬುದ
ನಾನರಿದೆ ನೋಡಯ್ಯಾ.
Transliteration Avaranivarage hēḷaladēke,
ivaranavarige hēḷaladēke?
Obbarige hēḷi kūgiḍalēke,
obbarige kaṇṇugaḷa haraharike.
Kapilasid'dhamallinātha,
nīnikkida toḍakina nāṭakavembuda
nānaride nōḍayya.