•  
  •  
  •  
  •  
Index   ವಚನ - 122    Search  
 
ಅವರವರ ನುಡಿದ ನುಡಿಯ ಅವರವರಿಗೆ ಹಾಸುವೆನಯ್ಯಾ, ನೋಡಾ! ಅಯ್ಯಾ! ಮತ್ತೆ ಮಾರುಗೊಂಡಡೆ ಮಾರಾಟಕ್ಕೆ ಸಂದಿತೆಂಬ ನೋಡಯ್ಯಾ. ಮತ್ತೆ ಮಾರುಗೊಳ್ಳದಿರ್ದಡೆ ಮಾರಾಟಕ್ಕೆ ಸಲ್ಲದೆಂಬೆ ನೋಡಯ್ಯಾ. ನೋಡಯ್ಯಾ, ಈ ಹುಟ್ಟು ಸೈರಣೆ ಸಮತೆಯುಳ್ಳಡೆ ತನ್ನನೆ ಕೂಡಿಕೊಂಬನೈ ಎನ್ನ ಕಪಿಲಸಿದ್ಧಮಲ್ಲೇಶ್ವರದೇವ, ಹಾ! ಅಯ್ಯಾ!
Transliteration Avaravara nuḍida nuḍiya avaravarige hāsuvenayyā, nōḍā! Ayyā! Matte mārugoṇḍaḍe mārāṭakke sanditemba nōḍayya. Matte mārugoḷḷadirdaḍe mārāṭakke salladembe nōḍayya. Nōḍayya, ī huṭṭu sairaṇe samateyuḷḷaḍe tannane kūḍikombanai enna kapilasid'dhamallēśvaradēva, hā! Ayyā!