Index   ವಚನ - 126    Search  
 
ಆ ಕರವು ಅಪ್ರಮಾಣವು ಸದಾಕಾಲದಲ್ಲಿ ಏಕೋದೇವನ ಹಿಡಿದು ನಿತ್ಯವಾಗಿರ್ಪುದು. ಆ ಹಸ್ತ ಅವ್ಯಕ್ತ ಹಸ್ತ ಶಿವಪಾಶ. ಆ ಹಸ್ತ ಸಕಲ ದೈವಾದಿ ಶ್ರೇಷ್ಠ ಅನೇಕ ರೂಪನ ಏಕೋರೂಪಾಗಿ ಹಿಡಿದುದೈ ಕಪಿಲಸಿದ್ಧಮಲ್ಲಿಕಾರ್ಜುನ.