•  
  •  
  •  
  •  
Index   ವಚನ - 130    Search  
 
ಆಗಮದ ಅನು ನಿಯಮದ ಸಂದೇಹ, ಯೋಗದ ಭ್ರಾಂತು ಕ್ರೀಯ ಸಂಕಲ್ಪ, ನಷ್ಟದ ಚಿಂತೆ ಈ ಪಂಚಮಹಾಪಾತಕವುಳ್ಳಾತ ಭಕ್ತಿಯ ನಿಯಮಿಗನಲ್ಲ. ಚಿಂತೆ, ಸಂಕಲ್ಪ, ಭ್ರಾಂತು, ಸಂದೇಹ, ಅನುವಿನ ಗುಣವಳಿದು ತಾನಾದಡೆ, ತಾನೆ ನಿತ್ಯ ಕಾಣಾ, ಕಪಿಲಸಿದ್ಧಮಲ್ಲಿನಾಥಾ.
Transliteration Āgamada anu niyamada sandēha, yōgada bhrāntu kriyā saṅkalpa, naṣṭada cinte ī pan̄camahāpātakavuḷḷāta bhaktiya niyamiganalla. Cinte, saṅkalpa, bhrāntu, sandēha, anuvina guṇavaḷidu tānādaḍe, tāne nitya kāṇā, kapilasid'dhamallināthā.