Index   ವಚನ - 134    Search  
 
ಆ ಜ್ಞಾನಸಿದ್ಧನನರ್ಚಿಸಿ[ಹೆ]ನೆಂದೆಂಬೆ, ಆದಿ ಅಕ್ಷರದ ಪವಣೆಂತುಟು? ಮುನ್ನ ಮುವತ್ತಾರು ತನ್ನ ಸ್ಥಲದೊಳಗೊಪ್ಪಿ ಇನ್ನು ನಾ ನೀನೆಂದೆಂಬ ಸಂದಿಲ್ಲವಯ್ಯಾ. ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನ ಮಂಗಳದ ಬಯಲೊಳಗೆ ಬೆಳಗುತಾನೆ.