ಆ ಜ್ಞಾನಸಿದ್ಧನ ಆನಂದಸ್ಥಾನದಲ್ಲಿ ಕಂಡೆ,
ಒಪ್ಪಿರ್ದ ಶುದ್ಧ ಸಿಂಹಾಸನಾರೂಢನಾಗಿ,
ಒಪ್ಪಿರ್ದ ಅಪರ ಮಧ್ಯ ಪೂರ್ವವೆಂಬ
ಹೋಬಳಿಗೆ ತಾನೆ ಹೊಲಬಿಗನಾಗಿ,
ಬಂದವರನೊಳಕೊಂಡು ಬಹವರನು ಕರೆವುತ್ತ,
ಬಾರದವರನೇಡಿಸುತ್ತ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ಅಜ್ಞಾನಭರಿತವಾಗಿ ಇದ್ದಾನು.
Art
Manuscript
Music
Courtesy:
Transliteration
Jñānasid'dhana ānandasthānadalli kaṇḍe,
oppirda śud'dha sinhāsanārūḍhanāgi,
oppirda apara madhya pūrvavemba
hōbaḷige tāne holabiganāgi,
bandavaranoḷakoṇḍu bahavaranu karevutta,
bāradavaranēḍisutta,
kapilasid'dhamallikārjunayya
ajñānabharitavāgi iddanu.