ಆಚಾರವಿಚಾರ, ಗುರುವಿಚಾರ, ಲಿಂಗವಿಚಾರ,
ಸರ್ವವಿಚಾರ ತಿಳುಹಿದವರು ನೀವೆ.
ನುಡಿದಂತೆ ನಡೆವಲ್ಲಿ ಭೇದದ
ಅನುಭವ ಮಾಡಿ ಹೇಳುವವರು ನೀವೆ.
ಈ ನುಡಿಗಡಣವು
ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗಕ್ಕೆ ಸೊಗಸದು,
ಕೇಳಾ ಪ್ರಭುವೆ.
Art
Manuscript
Music
Courtesy:
Transliteration
Ācāravicāra, guruvicāra, liṅgavicāra,
sarvavicāra tiḷuhidavaru nīve.
Nuḍidante naḍevalli bhēdada
anubhava māḍi hēḷuvavaru nīve.
Ī nuḍigaḍaṇavu
kapilasid'dha mallikārjunaliṅgakke sogasadu,
kēḷā prabhuve.