ವಚನ - 142     
 
ಆತನೆನ್ನ ನೆನೆವನಾಗಿ ನೆನೆವೆ; ಆತನೆನಗೆ ಕೂಪನಾಗಿ ಕೂಪೆ. ಹತ್ತಿದಡೆ ಹರಿಯ ಕಾಣೆ, ಬಿಚ್ಚಿದಡೆ ಬೇರೆ ಕಾಣೆ. ಇಂತೊಬ್ಬರೊಬ್ಬರನು ನೆರೆದು ತಾನು ತಾನಾಗಿದ್ದ, ಕಪಿಲಸಿದ್ಧಮಲ್ಲಿನಾಥ ದೇವರ ದೇವ.