ಆದ್ಯಕ್ಷರದ ಭೇದವನರಿದೆನೆಂಬ ಯೋಗಿ ನೀ ಕೇಳಾ:
ಆದಿಗೆ ಅನಾದಿ ಅಂತ್ಯವಾಗಿಪ್ಪುದು,
ನಿತ್ಯವು ತಾ, ನಿನಗರಿಯಬಪ್ಪುದೆ?
ಆದಿಯ ನಾದದ ಆಮೋದವನು ಭೇದಿಸಿ ಹಿಡಿದಾತ ಸಾಧಕ ಸಿದ್ಧನೆ?
ಅಲ್ಲ, ಆತ ಸುಸಿದ್ಧ!
ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ,
ಅನಾಹತಬ್ರಹ್ಮದಲ್ಲಿ ಆಂದೋಳನು.
Art
Manuscript
Music
Courtesy:
Transliteration
Ādyakṣarada bhēdavanaridenemba yōgi nī kēḷā:
Ādige anādi antyavāgippudu,
nityavu tā, ninagariyabappude?
Ādiya nādada āmōdavanu bhēdisi hiḍidāta sādhaka sid'dhane?
Alla, āta susid'dha!
Kapilasid'dhamallikārjunanalli,
anāhatabrahmadalli āndōḷanu.