•  
  •  
  •  
  •  
Index   ವಚನ - 145    Search  
 
ಆದ್ಯಕ್ಷರದ ಭೇದವ, ನಾದದಾಮೋದದ ಆನಂದವ, ನಾನು ನೀನೆಂಬ ಸಂದು ಸವೆದ ಭೇದವ, ಅದನೇನೆಂಬೆನಯ್ಯಾ? ಅದು ವಾಙ್ಮನಸಾಗೋಚರವ. ಅದು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ನೀ ಬಂದು ತೋರಿ ನೀ ಸಾಕ್ಷಿಯಾಗಿ ನೀನೆಯೆಂಬೆ.
Transliteration Ādyakṣarada bhēdava, nādadāmōda ānandava, nānu nīnemba sandu saveda bhēdava, adanēnembenayyā? Adu vāṇmanasāgōcarava. Adu kapilasid'dhamallikārjunayya nī bandu tōri nī sākṣiyāgi nīneyembe.