Index   ವಚನ - 164    Search  
 
ಆಧಾರಸ್ಥಾನದಲಿ ಅನಿಮಿಷ ಲಿಂಗವನು ವಾಯದ ಕರದಲ್ಲಿ ಭೇದಮಾಡಿ, ಆಧಾರ ಸ್ಥಾನದಲಿ ಒಳಹೊಕ್ಕಡದು ತಾನು ವಾ[ಯದ]ಕರ ನಿತ್ಯಕರವಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಾ, ಸೋಹಂ ಪದಾರ್ಥಕ್ಕೆ ಬೀಜ ತಾನು.