Index   ವಚನ - 166    Search  
 
ಆಧೇಯಾಧಾರವಿಲ್ಲದಂದಿನ ಶ್ರೀವಿಭೂತಿಯನೆನ್ನ ಲಲಾಟದಲ್ಲಿ ಪಟ್ಟವ ಕಟ್ಟಿದನಯ್ಯಾ, ಎನ್ನ ತಂದೆ ಬಸವಣ್ಣನು. ಆ ವಿಭೂತಿಯನೆನ್ನಂಗದಲ್ಲಿ ಧರಿಸಿದಲ್ಲದೆ ಲಿಂಗಾರ್ಚನೆಯ ಮಾಡೆನಯ್ಯಾ. ಆ ವಿಭೂತಿಯನಾಗಮಸ್ಥಾನವನರಿದು ಧರಿಸಿ ನಿಮ್ಮಡಿಯ ನಂಬಿದೆನಯ್ಯಾ, ಕಪಿಲಸಿದ್ಧ ಮಲ್ಲಿನಾಥಯ್ಯಾ.