ವಚನ - 180     
 
ಆನು ಭಕ್ತನೆಂಬೆ. ಹೊರ ಹಚ್ಚೆ ಒಳ ಬೊಳ್ಳೆಯಾನಯ್ಯಾ. ತನುಮನಭಕ್ತಿ ಇನಿಸಿಲ್ಲ ನಿಮಗಾನು ಮಚ್ಚಲರಿಯೆ ಕಂಡಯ್ಯಾ. ಬೇರೆ ಬಲ್ಲವರಿಗೆ ಎಲೆಯ ಬಣ್ಣಿಸುವಂತೆ ನಿಮಗಾನು ಮಚ್ಚಿದರೆ ಗತಿಯೋಳವೆ? ಕಪಿಲಸಿದ್ಧಮಲ್ಲಿಕಾರ್ಜುನಾ.