Index   ವಚನ - 196    Search  
 
ಆರ ಮುನ್ನತಿಗಳೆದು ತೋರಿದ್ದ ಸೀಮೆಯನು. ಆರನೊಯೈದಲ್ಕೆ ಏಳೆಂಟನತಿಗಳೆದು ತೋರಿರ್ದನೆರಡರಲಿ ಮುಕ್ತ್ಯಂಗನೆ. ಸಂಗಸುಖವನೆ ಅಳಿದು ಹಂಗುಹರಿದಿಹ ಬ್ರಹ್ಮ ಅಂಗನೆಯ ಅಕ್ಷರತ್ರಯದ ಕಂಗಳಲ್ಲಿ ಏವುಂಟು ಕಾನನದಲೋಲಾಡಿ ಲಿಂಗ ನಿಮ್ಮ ಬೆರಸಿದ ಕಪಿಲಸಿದ್ಧಮಲ್ಲೇಶ್ವರಾ.