•  
  •  
  •  
  •  
Index   ವಚನ - 197    Search  
 
ಆರರಲ್ಲಿ ಅನಿಮಿಷವು, ಮೂರರಲ್ಲಿ ಮುನಿಮುಕ್ತಿ ತೋರುವ ಪ್ರಾಪಂಚು ಸೀಮೆಯಲಿ ಗಾರಪ್ಪ ವರ್ಗವನು ಮೀರಿಪ್ಪ ಸೀಮೆಯ ತೋರಿಪ್ಪ ಅತಿಶಯದ ತತ್ವಂಗಳನು ಸೊಮ್ಮಿನ ಹಮ್ಮಿನ ಕರ್ಮದ ಕ್ರೀಯುವನು ನಿಃಕರ್ಮವೊಳಗಾದ ಸಾದಾಖ್ಯವಾ ಅವ್ವೆಯ ಮನದಲಿ ಆನಂದ ಸಾತ್ವಿಸಲು ತಾನೊಂದು ರೂಪಾಗಿ ತೋರುತಿರಲು ಅಯ್ಯನಜಲೋಕದಲಿ ಒಯ್ಯನಕ್ಷರದ್ವಯದ ಸ್ವೇಯ ಹೇಯಯೆಂಬ ಬೀಜಂಗಳ ಡಮರುಗದ ಸಿಂಹಾಸನದೊಳಗಿಪ್ಪ ಕೇಶರದ ಹಲವು ಬಣ್ಣದಲಿಪ್ಪ ಅಣುಮಾತ್ರ ಮಥನದಲ್ಲಿ ಮಥನಿಸುವ ಕಥನದಿಚ್ಛೆಯ ನೋಡ, ಸುಚಿತ್ತದಿಂದರ್ಚಿಸೈ ಕಪಿಲಸಿದ್ಧ ಮಲ್ಲೇಶ್ವರನ.
Transliteration Āraralli animiṣavu, mūraralli munimukti tōruva prāpan̄cu sīmeyali gārappa vargavanu mīrippa sīmeya tōrippa atiśayada tatvaṅgaḷanu som'mina ham'mina karmada kriyeyuvanu niḥkarmavoḷagāda sādākhyavā avveya manadali ānanda sātvisalu tānondu rūpāgi tōrutiralu ayyanajalōkadali oyyanakṣaradvayada svēya hēyayemba bījaṅgaḷa ḍamarugada sinhāsanadoḷagippa kēśarada halavu baṇṇadalippa aṇumātra mathanadalli mathanisuva kathanadiccheya nōḍa, sucittadindarcisai kapilasid'dha mallēśvarana।