Index   ವಚನ - 198    Search  
 
ಆರಾದಡೆನ್ನುವನು ಹೊಗಳಿದುದನು ಆ ಕಾಲದಲ್ಲಿಯೆ ನೆನವುತಿಪ್ಪುದು. ಆ ಕಾಲದಲ್ಲಿ ಎನ್ನ ಜರಿದವರ ಆ ಕಾಲದಲ್ಲಿ ಪ್ರಾಣವಧೆ ಮಾಡಿಹೆನೆಂಬುದು. ಅಯ್ಯೋ, ಸಂಸಾರ ಮಾಯಾ ಮನಕಂಜುವೆನು, ಅಯ್ಯ ನೀ ಕೂಡಿಕೊ ಕಪಿಲಸಿದ್ಧಮಲ್ಲಿಕಾರ್ಜುನಾ.