ವಚನ - 216     
 
ಆವನಾಗಿ ಒಬ್ಬನು ನಿಡುಮುಳ್ಳಿನ ಮೇಲೆ ಪೊರಳ್ಚುಗೆಯ, ಮೇಣು ಹಂಸೆಯ ಹಾಸಿನ ಮೇಲೆ ಪೊರಳ್ಚುಗೆಯ, ಪೊರಳ್ಚಿದಡೆ ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.