Index   ವಚನ - 244    Search  
 
ಇದ್ದೆಸೆಯಿಂದಾನು ನಿದ್ದೆಸೆಯಾದೆನೈ ಹೊದ್ದಿದ ಪ್ರಾಪಂಚ ಜರಿದೆ ನೋಡಾ ಮುಗ್ಧೆಯ ಕೂಟದಲಿ ಹೊದ್ದಿ ನೀ ನಾನಾದೆ ಸದ್ಯ ಫಲ ನೀನೆನ್ನ ಕಾಡುತಿಪ್ಪೆ. ಶಿಶು ಕಂಡ ಕನಸುವನು ದೆಸೆಗೆಟ್ಟ ಮೋಹವನು ಪಸರಿಸಿತು ಲೋಕಕ್ಕೆ ಅತಿ ಹರುಷದಿಂ. ದೆಸೆಗೇಡಿ ಮಾನವರು ದೆಸೆಯನರಿಯರು, ವಸುಧೆ ಪತಿ ಕಪಿಲಸಿದ್ಧಮಲ್ಲೇಶ್ವರನ.