ಇದೇನಯ್ಯಾ, ಮುಂಡವಿಲ್ಲದೆ
ರುಂಡ ಮಾತನಾಡುತ್ತಿದೆ!
ಮುಂಡಕ್ಕೆ ಸಮಾಧಿಯೊ?
ಮುಂಡ - ರುಂಡಕ್ಕೆ ಸಂಬಂಧವ
ಮಾಡಹೋದಡೆ ಸಿಗದಿಪ್ಪುದು,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Idēnayya, mundavillade
ruṇḍa mātanāḍuttide!
Muṇḍakke samādhiyo?
Muṇḍa - ruṇḍakke sambandhava
māḍahōdaḍe sigadippudu,
kapilasid'dhamallikārjunā.