ವಚನ - 249     
 
ಇಬ್ಬರೆಡೆಗೆ ಹರಿವ ಕುಂಟಣಿ ಒಬ್ಬಳೆಯವ್ವ! ತಾ ಮುನ್ನ ನೆರವಳವನ ಬಳಿಕ ತಂದು ನೆರಹುವಳೆಮಗೆ ಇವಳ ಕುಂಟಣಿತನವಿಂತುಟವ್ವಾ ನಾವಿಬ್ಬರು ಮಾಡಿ ನೆರವವನ ಕಪಿಲಸಿದ್ಧಮಲ್ಲಿನಾಥಯ್ಯಾ.