Index   ವಚನ - 259    Search  
 
ಇಹಪರವೆಂಬ ಇದ್ದೆಸೆಯನರಿತು ಇದ್ದೆಸೆಯಾದ ಗುರುಚರವಿಡಿದು ಇಹಪರವೆಂದರಿಯ. ಭಕ್ತನ ತನುವೆ ಶಿವನಿಪ್ಪಾಲಯವಾಗಿ ಇಹಲೋಕವೆ ಪರಲೋಕ; ಪರಲೋಕವೆ ಇಹಲೋಕ ನಿನ್ನ ಭಕ್ತಂಗೆ ಕಪಿಲಸಿದ್ಧಮಲ್ಲಿಕಾರ್ಜುನಾ.