ಎನ್ನ ತನುವ ಕಡಿವುದು ಬಸವಣ್ಣನ ಧರ್ಮವಯ್ಯಾ,
ಎನ್ನ ಮನವನೊರೆದು ನೋಡುವುದು
ಬಸವಣ್ಣನ ಧರ್ಮವಯ್ಯಾ,
ಎನ್ನ ಧನವ ಸೂರೆಮಾಡುವುದು
ಬಸವಣ್ಣನ ಧರ್ಮವಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Enna tanuva kaḍivudu basavaṇṇana dharmavayya,
enna manavanoredu nōḍuvudu
basavaṇṇana dharmavayya,
enna dhanava sūremāḍuvudu
basavaṇṇana dharmavayya,
kapilasid'dhamallināthayya।