•  
  •  
  •  
  •  
Index   ವಚನ - 290    Search  
 
ಎನ್ನ ತನು ಶುದ್ಧವಾಯಿತ್ತು ಚೆನ್ನಬಸವಣ್ಣನಿಂದ; ಎನ್ನ ಜೀವ ಶುದ್ಧವಾಯಿತ್ತು ಬಸವಣ್ಣನಿಂದ; ಎನ್ನ ಭಾವ ಶುದ್ಧವಾಯಿತ್ತು ಪ್ರಭುದೇವರಿಂದ. ಇಂತೆನ್ನ ತನು-ಜೀವ-ಭಾವಂಗಳಲ್ಲಿ ಇಷ್ಟ ಪ್ರಾಣ ಭಾವಂಗಳ ಕುರುಹ ಕಂಡು ನಿಷ್ಠೆ ನಿಬ್ಬೆರಗಾದೆ ನಾನು, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Enna tanu śud'dhavāyittu cennabasavaṇṇaninda; enna jīva śud'dhavāyittu basavaṇṇaninda; enna bhāva śud'dhavāyittu prabhudēvarinda. Intenna tanu-jīva-bhāvagaḷalli iṣṭa prāṇa bhāvagaḷa kuruha kaṇḍu niṣṭhe nibberagāde nānu, kapilasid'dhamallikārjunayya.