Index   ವಚನ - 292    Search  
 
ಎನ್ನ ನೀ ಒಲಿವೆ, ಒಲ್ಲೆ ಎಂಬುದನು ಅರಿಯಲು ಬಾರದು ಹಾ! ಹಾ! ಅಯ್ಯಾ! ನೀನೊಲಿವಂತೆ ಗೆಯ್ವೆ ನಾನು. ಒಲ್ಲದಂತೆ ಇರುವೆ ನೀನಯ್ಯಾ. ಎನ್ನ ನೀ ಕರ[ಕರೆ] ಕಾಡದಿರಯ್ಯಾ, ಎನ್ನ ಕಪಿಲಸಿದ್ಧಮಲ್ಲೇಶ್ವರದೇವರ ದೇವಯ್ಯಾ.