ಎನ್ನ ಸಕಲಕ್ಕೆ ಗುರು ಬಸವಣ್ಣ,
ಎನ್ನ ನಿಃಕಲಕ್ಕೆ ಗುರು ಬಸವಣ್ಣ ;
ಎನ್ನ ಸಕಲ ನಿಃಕಲ ಕೂಡಿದಾನಂದದಾದಿ ಪದವೆನಿತ ಆಗೆನಿಸಿ,
ಪದವ ಮೀರಿದ ಸದಮಲಜ್ಞಾನಜ್ಯೋತಿರ್ಮಯನೈ.
ಬಸವಣ್ಣನೇ ಶರಣು, ಬಸವಣ್ಣನೇ ಶರಣು.
ಬಸವಣ್ಣನೇ ಭಕ್ತಿ ಮುಕ್ತಿಗೆ ಮೂಲವು.
ಬಸವಣ್ಣನ ನೆನೆದು ಅನಿಮಿಷಾಕ್ಷರದಿಂದ ಬಸವಪದವಾಯಿತ್ತೈ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Enna sakalakke guru basavaṇṇa,
enna nikalakke guru basavaṇṇa;
enna sakala nikala kūḍidānandadādi padavenita āgenisi,
padava mīrida sadamalajñānajyōtirmayanai.
Basavaṇṇanē śaraṇu, basavaṇṇanē śaraṇu.
Basavaṇṇanē bhakti muktige mūlavu.
Basavaṇṇana nenedu animiṣākṣaradinda basavapadavāyittai,
kapilasid'dhamallikārjunā.