Index   ವಚನ - 328    Search  
 
ಎಲೆ ಭ್ರಾಂತುಗೊಂಡ ಮರುಳೆ, ನೀ ಕೇಳಾ, ಹಾ! ಹಾ! ಅಯ್ಯಾ, ಈಶ್ವರ ತಾ ಮುನ್ನ ಹರಸಿ ಕಟ್ಟಿದ ನೊಸಲಪಟ್ಟವ ಬೇರೆ ಮತ್ತೊಬ್ಬರು ಹೆಚ್ಚಿಸಿ ಕುಂದಿಸಿ ಕಟ್ಟಬಲ್ಲರೆ? ಅಯ್ಯಾ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ, ತಾ ಮುನ್ನ ಹರಸಿ ಕಟ್ಟಿದಂತಹುದಯ್ಯಾ.