ಎಲೆಯವ್ವ, ಆತನ ಬಾಯಲ್ಲಿ ಬೆಳವುತ್ತಲಿದ್ದೆ ನಾ,
ಎಲೆಯವ್ವ, ಆತನ ಸರದೊಳಗೆ ಕೂಡಿ ಸರಹುತ್ತಿದ್ದೆ ನಾ,
ಎಲೆಯವ್ವ, ಎಲೆಯವ್ವ, ಆತನ ಗಳದೊಳಗೆ ಕೂಡಿ ಗಳಹುತ್ತಿದ್ದೆ ನಾ,
ಎಲೆಯವ್ವ, ಎಲೆಯವ್ವ, ಆತನ ಅಪ್ಪುದಪ್ಪಿನೊಳಗೆ ಹುಟ್ಟಿ
ದಪ್ಪಗೊಂಡು ಬೆಳವುತ್ತಿದ್ದೆ ನಾ,
ಕಪ್ಪು ಕಪ್ಪುಗಳನೆ ನುಂಗಿ ತನ್ನ ಕಪ್ಪ ಮೆರೆವನವ್ವಾ
ಎನ್ನ ಕಪಿಲಸಿದ್ಧಮಲ್ಲಿನಾಥ, ದೇವರ ದೇವ.
Transliteration Eleyavva, ātana bāyalli beḷavuttalidde nā,
eleyavva, ātana saradoḷage kūḍi sarahittu nā,
eleyavva, eleyavva, ātana gaḷadoḷage kūḍi gaḷahuttittu nā,
eleyavva, eleyavva, ātana appudappinoḷage huṭṭi
dappagoṇḍu beḷavittu nā,
kappu kappugaḷane nuṅgi tanna kappa merevanavvā
enna kapilasid'dhamallinātha, dēvara dēva.