ಏರಿಯನೇರಿ ಬರುವಲ್ಲಿ
ಮೂವತ್ತಾರು ಮಂಟಪದ ಮಣಿಯ ತುಂಬಿ
ಕೇರಿ ಕೇರಿಯ ತುದಿಯ ತಿರುಗಲು,
ಸುಂಕಿಗರಿನ್ನೂ ಹದಿನಾರು ಮಂದಿ
ಮೂವತ್ತಾರು ಮಂಟಪದಲ್ಲಡಗಿದರಯ್ಯಾ.
ಏರಿ ಬರುವ ಪುರುಷ ಮೂವರು ತಳವಾರರ ಕೂಡಿಕೊಂಡು,
ಮೂವತ್ತಾರು ಮಂಟಪದಲ್ಲಿ ಅಡಗಿದ
ಇನ್ನೂರ ಹದಿನಾರು ಸುಂಕಿಗರನರಸಲು.
ಮೂವರು ತಳವಾರರು ತನ್ನ ನುಂಗಿದರಯ್ಯಾ,
ಕಪಿಲಸಿದ್ಧಮಲ್ಲಿನಾಥಯ್ಯಾ.