ಐದೆ ಬಿನ್ನಾಣಿಕೆ ಬಿನ್ನಾಣಿಯ
ಬಸುರಲ್ಲಿ ಹುಟ್ಟಿದವಳು.
ಬಾಯಲ್ಲಿ ಬಳೆದೊಟ್ಟವಳು;
ಬಾಯಲ್ಲಿ ತಲೆಯಾದವಳು;
ತಲೆಯೊಳಗೆ ಮೊಲೆಯಾದವಳು;
ಮೊಲೆಯೊಳಗೆ ನಾಭಿಯಾದವಳು;
ನಾಭಿಯೊಳಗೆ ಬಸುರಾದವಳು;
ಬಸುರೊಳಗೆ ಬೆನ್ನಾದವಳು;
ಬೆನ್ನೊಳಗೆ ಕಾಲಾದವಳು;
ಗಂಡಂಗೆ ಕೈಯೆಂದು ಬಾಯಲ್ಲಿ ಹಿಡಿದು ಹರಿದವಳು
ಕಪಿಲಸಿದ್ಧಮಲ್ಲಿನಾಥನ ಬಾಯಲ್ಲಿ ಭೋಗಿಯಾದವಳು.
ಇಂತಪ್ಪ ವಿದ್ಯದ ಬೇಟದ ಮಾತಿನ ಕೊಂಬ ಹೇಳಿದಡೆ,
ಅಲ್ಲಿಗೆ ಬಂದಡೆ
ತಾ ಕಂಡಯ್ಯಾ, ಐದೆ ಬಿನ್ನಾಣಿಕೆ!
Art
Manuscript
Music
Courtesy:
Transliteration
Aide binnāṇike binnāṇiya
basuralli huṭṭidavaḷu.
Bāyalli baḷedoṭṭavaḷu;
bāyalli taleyādavaḷu;
taleyoḷage moleyādavaḷu;
moleyoḷage nābhiyādavaḷu;
nābhiyoḷage basurādavaḷu;
basuroḷage bennādavaḷu;
bennoḷage kālādavaḷu;
gaṇḍaṅge kaiyendu bāyalli hiḍidu haridavaḷu
kapilasid'dhamallināthana bāyalli bhōgiyādavaḷu.
Intappa vidyeya bēṭada mātina komba hēḷidaḍe,
allige bandaḍe
tā kaṇḍayya, ide binnāṇike!