ವಚನ - 373     
 
ಒಬ್ಬರಸು ಮೋಹಿತನಾಗಿ, ಅಂದೇ ಲಗ್ನವಾಗಿ, ಅಂದೇ ರತಿಯಾಗಿ ಅಂದೇ ಪತಿ ಮೃತಿಯಾದ ದರಿದ್ರ ನಾರಿಯ ತೆರನಾಯಿತ್ತೆನ್ನ ಮನ. ಒಬ್ಬರಸು ಭೂಪ್ರದಕ್ಷಿಣೆ ಮಾಡಿ, ಭೂದೇವಿಯ ಮಗನ ಜನನ ವಾರ್ತೆಯನಂದೇ ಕೇಳಿ, ಅಂದೇ ಮಗನ ಮೃತಿಯಾದರಸನ ಮನವಾದ ತೆರನಾಯಿತ್ತೆನ್ನ ಮನ. ತನ್ನ ಕೊಟ್ಟು ತಾ ಹೋದಡೆ ಗುರುಸ್ಥಲ ಹೋಯಿತ್ತು. ಲಿಂಗಸ್ಥಲ ಹೋಯಿತ್ತು, ಜಂಗಮಸ್ಥಲ ಮೊದಲೆ ಹೋಯಿತ್ತು. ಇನ್ನಾರ ಪಾದವಿಡಿವೆ? ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವ ಮಹಾಪ್ರಭುವೆ.