Index   ವಚನ - 386    Search  
 
ಕಂಡಲ್ಲಿ ಕರೆಯೆ ಮಾಯ, ನಿಂದಲ್ಲಿ ನಿರಾಮಯ. ಇವಗೆ ಕೂರ್ತು ವಿಕಳಾವಸ್ಥೆಗೊಂಡೆನವ್ವಾ. ಮತ್ತೆ ಮುಂದೆ ನಿಂದವರ ಸಾರೆಂಬೆನು, ಹಿಂದುಗಳೆವೆನು. ಮುಂದಕ್ಕೆ ಸಾರಿದವರ ನೋಡುತ್ತಿದ್ದೆನವ್ವಾ. ಕಂಡವರ ಸಾರೆಂಬೆ; ನಿಂದ ಬಯಲ ನೆರೆವೆ. ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನವ್ವಾ.