Index   ವಚನ - 425    Search  
 
ಕರುಣಿ, ಮಹಾದಾನಿ, ನಿನ್ನವರಿಗೆ ನೀನು ಕರುಣ ಕಂದೆರೆವ ಭೇದವ, ಅವರ ಮನದ ಮಸ್ತಕದಲ್ಲಿ ನಿನ್ನ ಮಹಾಜ್ಯೋತಿ ಬೆಳಗುವ ಭೇದವ, ಅರಿಯಬಹುದೆ ಎಲ್ಲರಿಗೆ, ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ, ನಿನ್ನ ಕರುಣವುಳ್ಳವರಿಗಲ್ಲದೆ?