ಕಾಯ ಲಿಂಗವೊ ಕಾಯದಲಿ ಸಾರಿಪ್ಪ ಲಿಂಗ ಲಿಂಗವೊ?
ಪ್ರಾಣ ಲಿಂಗವೊ ಪ್ರಾಣದಲ್ಲಿ ಸಾರಿಪ್ಪ ಲಿಂಗ ಲಿಂಗವೊ?
ಜ್ಞಾನ ಲಿಂಗವೊ ಜ್ಞಾನದ ಮೊನೆಯ ಮೇಲೆ ತೋರುವ ಬೆಳಗು ಲಿಂಗವೊ?
ಲಿಂಗ ಪ್ರಾಣ ಪ್ರಾಣ ಲಿಂಗವೆಂಬುದನೆಂತೆಂದರಿಯೆನು.
ನಿಮ್ಮ ಕಾಯದ ಕರಸ್ಥಲವ ಸಾರಿದ ಲಿಂಗ
ಪ್ರಾಣದೊಳು ವೇದ್ಯವಾದ ಪರಿಯ ಹೇಳಾ ಪ್ರಭುವೆ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kāya liṅgavo kāyadali sarippa liṅga liṅgavo?
Prāṇa liṅgavo prāṇadalli sarippa liṅga liṅgavo?
Jñāna liṅgavo jñānada moneya mēle tōruva beḷagu liṅgavo?
Liṅga prāṇa prāṇa liṅgavembudanentendariyenu.
Nim'ma kāyada karasthalava sārida liṅga
prāṇadoḷu vēdyavāda pariya hēḷā prabhuve,
kapilasid'dhamallikārjunā.