•  
  •  
  •  
  •  
Index   ವಚನ - 441    Search  
 
ಕಾಯದ ಹೊರಕಣ್ಣ ಮುಚ್ಚಿ ಮನ ಭಾವದರಿವಿನೊಳಕಣ್ಣ ತೆರೆದು ಬಂದಾನೆಂಬ ಪರವಶಕ್ಕೆ ಕಿವಿಯಾಂತು ಕೇಳುತ್ತಿದ್ದೇನೆ. ಅದೆತ್ತಣಿಂದ ಸುಳಿದನೆಂದರಿಯೆನಯ್ಯಾ. ಅರುಹಿನ ನೇತ್ರಕ್ಕೆ ಶರ್ವನ ಪ್ರತಿಬಿಂಬ ಸೂಚಿಸಿ ಹೊಳೆದಡೆ ಕಣ್ದುಂಬಿ ನೋಡಿದೆ ಮನದುಂಬಿ ನೆನೆದೆ, ಆ ಪ್ರತಿಬಿಂಬವಿಡಿದು ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವೆನು.
Transliteration Kāyada horakaṇṇa mucci mana bhāvadarivinoḷakaṇṇa teredu bandānemba paravaśakke kiviyāntu kēḷuttide. Adettaṇinda suḷidanendariyenayyā. Aruhina nētrakke śarvana pratibimba sūcisi hoḷedaḍe kaṇdumbi nōḍide manadumbi nenede, ā pratibimbaviḍidu kapilasid'dhamallikārjunana kūḍuvenu.