•  
  •  
  •  
  •  
Index   ವಚನ - 443    Search  
 
ಕಾಯವ ನಿಶ್ಚೈಸಲಿಲ್ಲ, ಜೀವವ ನಿಶ್ಚೈಸಲಿಲ್ಲ; ಕಾಯ ಜೀವ ಎರಡಕ್ಕೂ ನೆಲೆಯಿಲ್ಲವಯ್ಯಾ. ಸುಖವ ನಿಶ್ಚೈಸಲಿಲ್ಲ, ದುಃಖವ ನಿಶ್ಚೈಸಲಿಲ್ಲ; ಸುಖ-ದುಃಖ ಎರಡಕ್ಕೂ ನೆಲೆಯಿಲ್ಲವಯ್ಯಾ. ರಾಜ್ಯವ ನಿಶ್ಚೈಸಲಿಲ್ಲ, ಲಕ್ಷ್ಮಿಯ ನಿಶ್ಚೈಸಲಿಲ್ಲ; [ರಾಜ್ಯ-ಲಕ್ಷ್ಮಿ ಎರಡಕ್ಕೂ ನೆಲೆಯಿಲ್ಲವಯ್ಯಾ] ಅಭ್ರಚ್ಛಾಯೆ, ಮರೀಚಿಕಾಜಲ, ಮಹೇಂದ್ರಜಾಲವಯ್ಯಾ ನನ್ನದು. ಮನೆ ನನ್ನದು, ಧನ ನನ್ನದು ಎಂಬ ಮರುಳ ಕೇಳಾ- ಕನಸಿನ ಸುಖ ಕಣ್ದೆರೆದಲ್ಲಿ ಹೋಯಿತ್ತು. ಹಾಲುಳ್ಳಲ್ಲಿ ಹಬ್ಬವ ಮಾಡಿ, ಗಾಳಿಯುಳ್ಳಲ್ಲಿ ತೂರಿಕೊಳ್ಳಿರಿ; ಬಳಿಕಲರಸಿದರುಂಟೆ? ಪರಮ ಸುಖವು. ನಿಜಗುರು ಕಪಿಲಸಿದ್ಧಮಲ್ಲಿಕಾರ್ಜುನನ ಹರಿಗೋಲುಳ್ಳಲ್ಲಿ ತೊರೆಯ ದಾಂಟಿದೆ.
Transliteration Kāyava niścayisalilla, jīvava niścayisalilla; kāya jīva eraḍakkū neleyillavayyā. Sukhava niścayisalilla; sukha-duḥkha eraḍakkū neleyillavayyā. Rājyava niścayisalilla, lakṣmiya niścaisalilla; [rājya-lakṣmi eraḍakkū neleyillavayyā] abhrācchāye, marīcikājala, mahēndrajālavayya nannadu. Mane nannadu, dhana nannadu emba maruḷa kēḷā- kanasina sukha kāṇade hōyittu. Hāluḷḷalli habbava māḍi, gāḷiyuḷḷalli tūrikoḷḷi; baḷikalarasidaruṇṭe? Parama sukhavu. Nijaguru kapilasid'dhamallikārjuna harigōluḷḷalli toreya dāṇṭide.