•  
  •  
  •  
  •  
Index   ವಚನ - 444    Search  
 
ಕಾಯವಿರೆ ಗುರುವ ನೆರೆವೆನೆಂಬವಂಗೆ ಹೇಳುವೆನಯ್ಯಾ. ತನುವೊಂದೆ ತನುವಾಗಿ, ಧನವೊಂದೆ ಧನವಾಗಿ, ಮನವೊಂದೆ ಮನವಾಗಿ, ಹಿಡಿವ ಗತಿ ಒಂದಾದ ಭಕ್ತಿಯ ಶಿವಕೂಟ ಒಂದೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kāyavire guruva nerevenembavaṅge hēḷenayyā. Tanuvonde tanuvāgi, dhanavonde dhanavāgi, manavonde manavāgi, hiḍiva gati ondāda bhaktiya śivakūṭa onde kapilasid'dhamallikārjunā.