ಕೂಟದ ರಚನೆಯ ಸಂದಳಿದು ನೋಟ ನಿಮ್ಮಲ್ಲಿ ನಟ್ಟು
ಸಮಕಳೆ ಎಂದಪ್ಪುದಯ್ಯಾ, ಸಮರತಿ ಎಂದಪ್ಪುದಯ್ಯಾ.
ಹಂಗ ಹರಿದು, ದಂದುಗ ಉಡುಗಿ
ಎನ್ನನೆಂದಿಂಗೆ ಒಳಕೊಂಬೆಯೊ ಗುರುವೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Kūṭada racaneya sandaḷidu nōṭa nim'malli naṭṭu
samakaḷe endappudayyā, samarati endappudayyā.
Haṅga haridu, danduga uḍugi
ennanendiṅge oḷakombeyo guruve,
kapilasid'dhamallikārjunayya.