ಕೂಟದ ತುರೀಯದಲಿ ಬೇಟ ಮತ್ತೆರಡಾಗಿ,
ಆಟವನು ಆಡಿದೆನು ಚಿತ್ರತರದ.
ಕೂಟವೂ ಬೇಟವೂ ಆಟ ಮತ್ತೊಂದಾಗಿ,
ನೋಟಂಗಳನಿಮಿಷದ ದೃಷ್ಟಿ ನಟ್ಟು,
ತಾನು ತಾನಾಗೀಗ ಸಾನಂದ ಸಂಬಂಧ.
ಆನಂದ ಮುಕ್ತ್ಯಂಗನೈಕ್ಯವಾಗಿ
ಲೋಕದೊಳಗಿದ್ದು ಲೌಕಿಕನು ತಾನಲ್ಲದೆ
ಏಕೈಕನಾದೆ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
Transliteration Kūṭada turīyadali bēṭa matteraḍāgi,
āṭavanu āḍidenu citratarada.
Kūṭavū bēṭavū āṭa mattondāgi,
nōṭaṅgaḷanimiṣada dr̥ṣṭi naṭṭu,
tānu tānāgīga sānanda sambandha.
Ānanda muktyaṅganaikyavāgi
lōkadoḷagiddu laukikanu tānallade
ēkaikanāde kapilasid'dhamallikārjunanalli.